A foundation for life...

ಮೆಲ್ಕಾರ್ ಮಹಿಳಾ ಕಾಲೇಜು ಕ್ರೀಡೋತ್ಸವ

ಮೆಲ್ಕಾರ್ ಮಹಿಳಾ ಕಾಲೇಜು ಕ್ರೀಡೋತ್ಸವ: 27/12/2016

ಮೆಲ್ಕಾರ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಕ್ರೀಡೋತ್ಸವವು ಶಾಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 27 ರಂದು ನಡೆಯಿತು. ಪ್ರತಿ ವರ್ಷವೂ ನಡೆವುವಂತೆ ಈ ಬಾರಿಯೂ ವಿದ್ಯಾರ್ಥಿನಿಯರಿಗೆ ಸರ್ವ ಕ್ರೀಡೆಯನ್ನು ನಡೆಸಲಾಯಿತು. ಝೋಯ ಅಖ್ತರ್ ಅಂತರಾಷ್ಟ್ರೀಯ ಜೆಒಪಾಲಿಟಿಕ್ಸ್ ಪದವೀದರು ಕ್ರೀಡಾ ದಿನವನ್ನು ಶಾಂತಿ ಸಂಕೇತವಾದ ಪಾರಿವಾಳವನ್ನು ಹಾರಿಸುವುದರೊಂದಿಗೆ ಉದ್ಘಾಟಿಸಿದರು. ಹೆಣ್ಣು ಮಕ್ಕಳ ಕಾಲೇಜು ಶಿಕ್ಷಣ ಹಾಗು ಕ್ರೀಡೆಯ ಮಹತ್ವವನ್ನು ತನ್ನ ಉದ್ಘಾಟನಾ ಮಾತಿನಲ್ಲಿ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಸಬೀನ ಅಬೂಬಕರ್ ಮನ:ಶಾಸ್ತ್ರ ಪದವೀದರಾದ ಇವರು ಮನೋ ಶಾಂತಿ ಮತ್ತು ಕ್ರೀಡೆಗೆ ಇರುವ ಸಂಬಂಧ ಹಾಗು ಅದರ ಅಗತ್ಯತೆಯನ್ನು ವಿವರಿಸಿದರು. ಅಂತಿಮವಾಗಿ ಪ್ರಾಂಶುಪಾಲರು ತನ್ನ ಅಧ್ಯಕ್ಷೀಯ ಮಾತಿನಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನ ಕ್ರೀಡಾ ದಿನದ ವಿಶೇಷತೆಯನ್ನು ವಿವರಿಸಿದರು. ವಿದ್ಯಾರ್ಥಿನಿ ಕ್ರೀಡಾ ನಾಯಕಿ ಫಾತಿಮಾ ಪ್ರಥಮ ಬಿ. ಎ . ಕ್ರೀಡಾ ದಿನದ ಪ್ರಮಾಣ ವಚನ ವನ್ನು ನೆರವೇರಿಸಿದರು. ನಾಶತ್ ನೀಝ ಅಂತಿಮ ಬಿ. ಕಾಮ್ ಕಾರ್ಯಕ್ರಮ ನಿರೂಪಿಸಿದರು. ಸನುಫ ದ್ವಿತೀಯ ವಿಜ್ಞಾನ ವಿಭಾಗ ಸರ್ವರನ್ನು ಸ್ವಾಗತಿಸಿದರು. ಕಾಲೇಜು ನಾಯಕಿ ಅಜ್ಮಿಯ. ಅಂತಿಮ ಬಿ.ಎ ಸರ್ವರನ್ನು ವಂದಿಸಿದರು. ಬಹುಮಾನದ ಮೂಲಕ ಕ್ರೀಡಾ ಸಾಧಕರನ್ನು ಪ್ರೊತ್ಸಾಹಿಸುದರೋಂದಿಗೆ ಕ್ರೀಡಾ ದಿನವನ್ನು ಮುಕತಾಯಗಾಳಿಸಲಾಯಿತು.